ಹುಲಿರಾಯ 2017ರ ಭಾರತದ ಕನ್ನಡ ಭಾಷೆಯ ಚಿತ್ರ. ಅರವಿಂದ್ ಕೌಷಿಕ್ ರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಗೇಶ್ ಕೋಗಿಲುರವರು ತಮ್ಮ ಎಸ್ಎಲ್ಎನ್ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಬಾಲು ಮಹೇಂದ್ರ ಮತ್ತು ದಿವ್ಯ ಉರುದುಗ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಕಾಡಿನ ಪ್ರದೇಶದಲ್ಲಿ ಹುಟ್ಟಿ ಬೆಳೆದ ನಾಯಕ ನಗರದ ಬದುಕಿಗೆ ಹೊಂದಿಕೊಳ್ಳಲು ಹೇಗೆ ಕಷ್ಟ ಪಡುತ್ತಾನೆ ಎಂಬ ಕತೆಯನ್ನು ಹೇಳುತ್ತದೆ. ಅರ್ಜುನ್ ರಾಮುರವರು ಚಿತ್ರಕ್ಕೆ ಸಂಗೀತ ಮತ್ತು ರವಿರವರು ಛಾಯಾಗ್ರಹಣವನ್ನು ನೀಡಿದ್ದಾರೆ. == ಪಾತ್ರವರ್ಗ == ಸುರೇಶ / ಹುಲಿರಾಯ ಪಾತ್ರದಲ್ಲಿ ಬಾಲು ನಾಗೇಂದ್ರ ಲಚ್ಚಿ ಪಾತ್ರದಲ್ಲಿ ದಿವ್ಯ ಉರುದುಗ ಮಲ್ಲಿ ಆಗಿ ಚಿರಶ್ರೀ ಅಂಚನ್ ರಘು ಪಾಂಡೇಶ್ವರ ರೇಣು ನಾಗೇಂದ್ರ ಕುಮಾರ್ ಕುಲದೀಪ್ ಶ್ರೀನಾಥ್ ಕೌಂಡಿನ್ಯ ಪ್ರದೀಪ್ ಹರೀಶ್ ನೀನಾಸಂ ರಕ್ಷೀತ್ ಶಿಂಧೆ == ಉಲ್ಲೇಖಗಳು ==